ಇತ್ತೀಚಿನ ಪಶ್ಚಿಮ ಬಂಗಾಳದ ಚುನಾವಣೆಯ ನಿರೀಕ್ಷಿತ ಫಲಿತಾಂಶ ಮಮತಾ ದೀದಿಗೆ ಅಘಾತ ಮತ್ತು ದೇಶದ ಜನತೆಗೆ ಅಚ್ಚರಿ ನೀಡಿದ್ದಂತು ಸತ್ಯ. ಅದಾದ ಮೇಲೆ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ ಪಿ.ಎ ಹತ್ಯೆ ಆಗಿದ್ದು ಹಾಗೂ ಮಮತಾ ದೀದಿಯ ಅಳಿಯನ ಮೇಲೆ ಸಾರ್ವಜನಿಕರಿಂದ ಥಳಿತ ಇವೆರಡು ಆ ಭಾಗದ ರಾಜಕೀಯದಲ್ಲಿ ಬಿಸಿ ಬಿಸಿ ಸುದ್ದಿಯಾಗಿದ್ದವು. ಇದೀಗ ಇದರ ಬೆನ್ನಲ್ಲೇ ಮಮತಾ ದೀದಿಗೆ ಅವಳ ರಾಜಕೀಯ ಸಾಮ್ರಾಜ್ಯವೇ ಕುಸಿದು ಬೀಳುವಂತಹ ಇನ್ನೊಂದು ಅಘಾತಕಾರಿ ಸವಾಲು ಎದುರಾಗಿದೆ. ಹೌದು ಟಿ.ಎಮ್.ಸಿ ಪಕ್ಷದ ಬರೋಬ್ಬರಿ ಇಪ್ಪತ್ತು ಸಂಸದರು ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಪತ್ರದಲ್ಲಿ ’20 ಸಂಸದರು NDA ಮೈತ್ರಿಭಾಗ’ ಹಾಗೂ ಅವರೆಲ್ಲ ಲೋಕಸಭೆಯಲ್ಲಿ ಪ್ರತ್ಯೇಕ ಗುಂಪಾಗಿ ಗುರುತಿಸಿಕೊಳ್ಳಲು ಸಹ ನಿರ್ಧರಿಸಿದ್ದು. ಈ ಸಂಖ್ಯೆ ಆ ಪಕ್ಷದ ಮೂರನೇ ಒಂದು ಭಾಗದಷ್ಟು ಇರುವುದರಿಂದ ಮಮತಾ ದೀದಿ ಕೂಡ ಅವರ ಮೇಲೆ ಯಾವ ಕ್ರಮವನ್ನೂ ತೆಗೆದುಕೊಳ್ಳಲು ಆಗುವುದಿಲ್ಲ. ಈ ಘಟನೆಯಿಂದ ಮಮತಾ ದಿದೀಯ ಟಿ.ಎಮ್.ಸಿ ಪಕ್ಷದ ಮೇಲಿನ ಸಂಪೂರ್ಣ ನಿಯಂತ್ರಣವೇ ಕೈತಪ್ಪಿ ಹೋಗಿದ್ದು ಅದರ ಅಸ್ತಿತ್ವವೇ ಇಲ್ಲದಂತಾಗಿದೆ. ಚುನಾವಣಾ ಫಲಿತಾಂಶದ ಬಳಿಕ ಹಲ್ಲು ಕಿತ್ತ ಹಾವಿನಂತಾಗಿದ್ದ ಟಿ.ಎಮ್.ಸಿ ಪಕ್ಷ ಈಗ ತಲೆಯೇ ಇಲ್ಲದ ಹಾವಿನಂತಾಗಿದೆ. ಸ್ವತಃ ಮಮತಾ ದೀದಿಯವರೇ ಭವಾನಿಪುರ ಕ್ಷೇತ್ರದಿಂದ ಸ್ಪರ್ದಿಸಿ ಸೋತಿರುವುದರಿಂದ ಅವರೇ ವಿಧಾನ ಸಭೆಯನ್ನು ಪ್ರವೇಶಿಸುವ ಹಾಗಿಲ್ಲ ಆದಾಗ್ಯೂ ಪಾರ್ಟಿಯ ನೇತಾರರಾಗಿ ಅವರ ಆಪ್ತರೊಬ್ಬರನ್ನ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡಲಾಯಿತು. ಇದರ ನಂತರ ಒಂದೊಂದಾಗಿ ಸುಮಾರು ಮೂರು ತುರ್ತು ಸಭೆ ಕರೆದರೂ ಒಟ್ಟು ಎಂಬತ್ತು ಶಾಸಕರ ಪೈಕಿ ಸಭೆಗೆ ಹಾಜರಾದವರು ಬೆರಳೆಣಿಕೆಯಷ್ಟು ಶಾಸಕರು ಮಾತ್ರ. ಒಟ್ಟಾರೆ ಈಗ
ಅಧಿಕಾರವಿದ್ದಾಗ ಸರಿಯಾದ ಆಡಳಿತ ನೀಡದಿದ್ದರೆ ಮತ್ತು ಸರಿಯಾದ ನಾಯಕತ್ವದ ಕೊರತೆಯಿದ್ದರೆ ಎಂತಹ ಪಕ್ಷವಾದರೂ ಸರಿ ನೆಲಕಚ್ಚುವುದು ಗ್ಯಾರಂಟಿ ಅನ್ನೋದು ಸತ್ಯ.